ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: Vidyasiri scolar ship :10 ತಿಂಗಳಿಗೆ 15,000 ವರಗೆ ಸ್ಕಾಲರ್ ಶಿಪ್.ಈಗಲೇ ಅರ್ಜಿ ಸಲ್ಲಿಸಿ!
ನಮಸ್ಕಾರ ಸ್ನೇಹಿತರೆ ! ಪ್ರಸ್ತುತ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ . ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ(SC/ST OBC/ PWD /backward classes) ವಿದ್ಯಾರ್ಥಿಗಳಿಗೆ ರೂಪಿಸಲಾಗಿರುವ ವಿದ್ಯಾರ್ಥಿ ವೇತನ ಯೋಜನೆಯಾಗಿರುತ್ತದೆ. ಇದು ವಿಶೇಷವಾಗಿ ಪೋಸ್ಟ್- ಮ್ಯಾಟ್ರಿಕ್ ( ಪಿಯುಸಿ, ಪದವಿ,ಇಂಟಿಗ್ರೇಟೆಡ್.. ಇತ್ಯಾದಿ) ಕೋರ್ಸ್ ಗಳಲ್ಲಿ ಓದುತ್ತಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ಇದು ಹಲವಾರು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸ್ಕಾಲರ್ಶಿಪ್ ಯೋಜನೆ ಇದಾಗಿದೆ.
ಯೋಜನೆಯನ್ನು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಜಾರಿಗೆ ಮಾಡಲಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಈ ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಬಳಸಿಕೊಳ್ಳಬೇಕೆಂದು ಇಚ್ಛಿಸುತ್ತೇವೆ. ಯಾರು ಸಹ ಮಿಸ್ ಮಾಡಬಾರದು. ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಅಂಶಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಯಾರು ಅರ್ಹರು?
- ಅಭ್ಯರ್ಥಿಯು ಭಾರತದ ನಾಗರಿಕ ಮತ್ತು ಕಾನೂನು ಬದ್ಧವಾಗಿ ಕರ್ನಾಟಕದ ನಿವಾಸಿ ಆಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು SC/ ST /OBC/ PWD ವರ್ಗಗಳ ಪಟ್ಟಿಯಲ್ಲಿ ಇರಬೇಕು.
- ಸಾಮಾನ್ಯವಾಗಿ, ಅರ್ಹರಾದ ವರ್ಗಗಳಿಗಾಗಿ ಆದಾಯದ ಮಿತಿ ₹2.50 ( ಕೆಲವೊಮ್ಮೆ ₹ 1.ಲಕ್ಷ ) ಎಂದು ನಿರ್ಧರಿಸಲಾಗಿರುತ್ತದೆ.
- ಈಗ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಯು ಸರ್ಕಾರದ ಮಾನ್ಯತೆ ಇರುವ ಕಾಲೇಜಿನಲ್ಲಿ ಪೋಸ್ಟ್ ಮ್ಯಾಟ್ರಿಕ್ ಕೋರ್ಸ್ ನಲ್ಲಿ ಓದುತ್ತಿದ್ದಾನೆ ಅಥವಾ ಓದುತ್ತಿದ್ದಾಳೆ.
- ಆದರೆ ಇದು ಸರ್ಕಾರಿ ಹಾಸ್ಟೆಲ್ ನಲ್ಲಿ ಪ್ರವೇಶ ಪಡೆಯದಿದ್ದವನಿಗೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಯೋಗ್ಯನಾಗುತ್ತಾನೆ.
- ವಿದ್ಯಾರ್ಥಿಯ ಊರು ಮತ್ತು ಕಾಲೇಜಿನ ನಡುವಿನ ಅಂತರ ( ಉದಾಹರಣೆ – ಹಳ್ಳಿಗಳಿಂದ ಪಟ್ಟಣಕ್ಕೆ ಕಾಲೇಜಿಗೆ ಹೋಗುವ ವಿದ್ಯರ್ಥಿ) ಗೆ ಮಾತ್ರ ಅವಕಾಶವಿರುತ್ತದೆ .
ಈ ಯೋಜನೆಯು ಯಾವ ಸಹಾಯವನ್ನು ನೀಡುತ್ತದೆ ?
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಊಟ ಮತ್ತು ವಸತಿ ಸಹಾಯಧನ : ಹಾಸ್ಟೆಲ್ ಹೊಂದಿಕೊಳ್ಳದ ಹಿಂದುಳಿದ ವಿದ್ಯಾರ್ಥಿಗಳಿಗೆ, ₹1,500 ತಿಂಗಳಿಗೆ( ಸಂಪೂರ್ಣ ಶೈಕ್ಷಣಿಕ 10 ತಿಂಗಳಿಗೆ ), ಒಟ್ಟು ಹತ್ತು ತಿಂಗಳಿಗೆ 15,000 ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.
- ಹಾಸ್ಟೆಲ್ ಮತ್ತು ಪಾಠ ಶುಲ್ಕ ರೀತಿ : ಕೆಲವು ಮಕ್ಕಳು ಹಾಸ್ಟೆಲ್ ಆವಾಸ ಅಥವಾ ಫ್ರೀ ಹಾಸ್ಟೆಲ್ ಅಥವಾ ಪಾಠ ಶುಲ್ಕ ರಿಯಾಯಿತಿಯನ್ನು ಪಡೆಯಬಹುದು.
ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- SC ST OBC ಸರ್ಟಿಫಿಕೇಟ್
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್.